ಮುಂದೆ ಏನು?

1
Education

ಮುಂದೆ ಏನು?

ಎಂದೂ ದೂರವಾಗದ ಪ್ರಶ್ನೆ,

ಮುಂದೆ ಏನು?

 

ಅಪ್ಪ ಅಮ್ಮನ ಪ್ರಶ್ನ ಅಲ್ಲ. 

ಅಕ್ಕ ತಂಗಿ ಅಣ್ಣ ತಮ್ಮನದು ಅಲ್ಲ. 

ಬರುವುದು ಎಂದೂ ಮಾತನಾಡಿದ ನೆಂಟರಿಂದ, 

ನೆರೆಹೊರೆಯರಿಂದ. ಯಾಕೆ ಹೀಗೆ?

 

ವಿಜ್ಞಾನ, ಕಲೆ, ವಾಣಿಜ್ಯ. 

ಇದು ಮೂರೇ ಅಲ್ಲ ಜೀವನಕ್ಕೆ ಬೇಕಾದದ್ದು. 

ಹೊಸ ವಿಷಯ ಆಯ್ಕೆ ಮಾಡಿದರೆ

ಹೊಸದಾದ ಷ್ರಶ್ನೆಗಳು ಬರುವುದು ನನ್ನೆಡೆ. 

ನಾನು ನನಗಾಗಿ ಓದುವುದನ್ನು ಮರೆತಿದ್ದೆ. 

 

ಕಲೆ – ಕಮ್ಮಿ ಅಂಕ ಇರಬೇಕು.

ವಿಜ್ಞಾನ – ಕಷ್ಟ ಆಗುತ್ತೆ. ಆದರೂ ಮಾಡು.

ವಾಣಿಜ್ಯ- ಕೆಲಸ ಸಿಗುವುದಿಲ್ಲ. 

 

ಚಿಂತಿತವಾಗಿರ ಬೇಕಾದವರಿಗೆ ಚಿಂತೆ ಇಲ್ಲ .

 

ಮುಂದೆ ಏನು ಎಂದಾಗ ಉತ್ತರ ಹೇಗೆ ಕೊಡಲಿ?

 

ನನಗೆ ಹಿಡಿಸಿದ ವಿಷಯದಲ್ಲಿ.

ನನಗೆ ಖುಷಿಯಿರುವ ವಿಷಯದಲ್ಲಿ.

ನನಗೆ ಇನ್ನು ಹೆಚ್ಚು ಓದಲು ಬಯಸುವ ವಿಷಯದಲ್ಲಿ.

ನಾನು ಆಯ್ಕೆ ಮಾಡುವ ವಿಷಯದಲ್ಲಿ.

 

ಮುಂದೆ ನನ್ಗೆ ಸೊಗಸಾದ ಜೀವನ ನಡೆಸಲು

ದಾರಿ  ಮಾಡಿಕೊಡುವ ವಿಷಯದಲ್ಲಿ.

 

ಅಪ್ಪ ಅಮ್ಮನ ಪ್ರಶ್ನ ಅಲ್ಲ. 

ಅಕ್ಕ ತಂಗಿ ಅಣ್ಣ ತಮ್ಮನದು ಅಲ್ಲ. 

ಬರುವುದು ಎಂದೂ ಮಾತನಾಡಿದ ನೆಂಟರಿಂದ, 

ನೆರೆಹೊರೆಯರಿಂದ. ಯಾಕೆ ಹೀಗೆ?

 

ಎಂದೂ ದೂರವಾಗದ ಪ್ರಶ್ನೆ,

ಮುಂದೆ ಏನು?

 

ಯಾಕೆ?

 

Leave your thought here

Your email address will not be published. Required fields are marked *