ಬೇಸಿಗೆ ಕಾಲ

Education

ಬೇಸಿಗೆ ಕಾಲ

ಖುಷಿಯಾದದ್ದು ಪರೀಕ್ಷೆ ಮುಗಿಯಿತೆಂದೊಅಥವ ಬೇಸಿಗೆ ರಜೆಯೆಂದೊ? ಯಾರು ಬಲ್ಲರು ಈ ಪ್ರಶ್ನೆಗೆ ಉತ್ತರ.

ಓದುವಾಗ ನನಗೆ ರಜೆಯ ಕಡೆ ಗಮನ ಆದರೆ ರಜದ ಸಮಯದಲ್ಲಿ ಮಾಡಿದ್ದು ಶಾಲೆಯ ಕೆಲಸ. ಈಗಿನ ಮಕ್ಕಳಿಗೆ ಅದರ ಅರಿವಿಲ್ಲ. ಅದರ ಪ್ರಾಮುಖ್ಯತೆಯ ಅಂದಾಜು ಸಹ ಇರುವುದಿಲ್ಲ.

ರಜೆಯ ದಿನ ಬೇಗ ಏದ್ದು ಆಡಲು ಹೋದ ಮಕ್ಕಳು ಹಸಿವಾದಾಗ ಮನೆಯ ನೆನಪು ಮಾಡಿಕೊಂಡು ಬರುವರು. ಅಜ್ಜಿಯ ಮನೆಗೆ ಹೋಗುವುದು ಒಂದು ಸಂಭ್ರಮ ಆಗಿನ ದಿನ. ಅದರ ಬದಲಾದ ರೂಪ ಈಗಿನ ಟ್ರಿಪ್‌ಗಳು.

ಗೆಳೆಯರ ಜೋಡಿ ಸುತ್ತಾಡುವ ಟ್ರೆಂಡಿನ ಹಿಂದೆ ಆಟವಾಡಿ ಮನೆಗೆ ತಡವಾಗಿ ಬಂದ ಕಾರಣ ಬಿದ್ದ ಏಟುಗಳು ಮುಚ್ಚಿ ಹೋಗಿವೆ.

ಅಮ್ಮನ ಸಂಡಿಗೆ ಮಾಡುವ ಕಾರ್ಯಕ್ರಮದಲ್ಲಿ ಸಹಾಯದ ಕೈಯಾಗಿದ್ದ ಇವರು ಈಗ ದಿನಕ್ಕೊಂದು ಹೊಸ ಹೊಸ ಕೆಫೆಗಳಿಗೆ ಹೋಗಿ ತರ ತರಹದ ತಿನಿಸನ್ನು ಟ್ರೈ ಮಾಡುವ ಕೈಗಳಾಗಿವೆ.

ಇವಾಗ ಖುಷಿಯಾಗುವುಧು ಪರೀಕ್ಷೆ ಮುಗಿಯಿತೆಂದೊಅಥವ ಬೇಸಿಗೆ ರಜೆಯೆಂದೊ ಬಂತು ಎನ್ನುವದಕ್ಕೊ?

ಉತ್ತರ ಬಲ್ಲವರು ಇದ್ದರೆ ಒಂದಿಷ್ಟು ತಿಳಿಸಿ.

Leave your thought here

Your email address will not be published. Required fields are marked *